ಗುಡುಗುಮ್ಮ ಬಂದ
ಹೆಡಿಗೇ ತಂದ
ಅಕ್ಕಿ ಬೇಡಂತೆ
ಭತ್ತ ಬೇಡಂತೆ
ನಮ್ಮನೆ ಪಾಪುನೇ ಬೇಕಂತೆ...
Saturday, August 30, 2008
ಆಚೆ ಮನೆ ಮಾಣಿ
ಆಚೆ ಮನೆ ಮಾಣಿಗೆ
ಮದ್ವೆ ವಯಸ್ಸು
ಬಂದೇ ಹೋತಡಾ
ಆಚೀಚೆ ಮನೆ
ಹೆಣ್ಣು ಹುಡ್ರುನ್ ನೋಡ್ಕ್ಯಂಡ್
ಕಣ್ ಕಣ್ ಬಿಡ್ತ್ನಡಾ
ಮದ್ವೆ ವಯಸ್ಸು
ಬಂದೇ ಹೋತಡಾ
ಆಚೀಚೆ ಮನೆ
ಹೆಣ್ಣು ಹುಡ್ರುನ್ ನೋಡ್ಕ್ಯಂಡ್
ಕಣ್ ಕಣ್ ಬಿಡ್ತ್ನಡಾ
Tuesday, August 19, 2008
Monday, August 18, 2008
ಮಂಗನ ಮದುವೆ
(ಬಿಸಿಲು ಮಳೆ ಒಟ್ಟಿಗೆ ಬಂದಾಗ ಈ ಹಾಡು)
ಬಿಸಿಲು ಮಳೆ
ಮಂಗನ ಮದುವೆ
ಚೊರಾಟೆ ಚಕ್ಲಿ
ನಂಜುಳ್ಳೆ ಪಾಯ್ಸ
ಕಪ್ಪೆ ದಿಬ್ಣ
ಬಿಸಿಲು ಮಳೆ
ಮಂಗನ ಮದುವೆ
ಚೊರಾಟೆ ಚಕ್ಲಿ
ನಂಜುಳ್ಳೆ ಪಾಯ್ಸ
ಕಪ್ಪೆ ದಿಬ್ಣ
ಒಪ್ಪೊತ್ತು
(ಮಡಿ ಅಜ್ಜಿಯ ಒಪ್ಪೊತ್ತಿನ ಹಾಡು)
ಗೋದಿ ದೋಸೆಯ
ಮಾಡಿ ತಿನ್ನಿ,
ಅದು ಇಲ್ಲಾದಿದ್ದರೆ
ಕುಟ್ಟಿದವಲಕ್ಕಿ ತಿನ್ನಿ
ತುಪ್ಪವ ಹಾಕಲು
ಚೆನ್ನ
ಗಟ್ಟಿ ಮೊಸರಿದ್ದರದಕ್ಕಿನ್ನೂ
ಚೆನ್ನಾ...
ಗೋದಿ ದೋಸೆಯ
ಮಾಡಿ ತಿನ್ನಿ,
ಅದು ಇಲ್ಲಾದಿದ್ದರೆ
ಕುಟ್ಟಿದವಲಕ್ಕಿ ತಿನ್ನಿ
ತುಪ್ಪವ ಹಾಕಲು
ಚೆನ್ನ
ಗಟ್ಟಿ ಮೊಸರಿದ್ದರದಕ್ಕಿನ್ನೂ
ಚೆನ್ನಾ...
Wednesday, August 13, 2008
ಚೌಪದ
(ಅಜ್ಜ ಹೇಳುತ್ತಿದ್ದ ಒಂದು ಹಾಡು)
ಚೌಪದವ ಚೌಪದವ
ನೀವೆಲ್ಲಾ ಕೇಳಿ..
ಕೇಳದಿದ್ದವರೆಲ್ಲ
ಹಾಳ್ ಬಾವಿ ಬೀಳಿ
ಸತ್ತ ಕಪ್ಪೆಯ ತಂದು
ಕಿವಿಗೆರಡು ಕಟ್ಟಿ
ಸತ್ತ ಹಾವನು ತಂದು
ಜನಿವಾರ ಹಾಕಿ
ಸತ್ತನೋ ಇದ್ದನೋ
ಒದ್ ಒದ್ದು ನೋಡಿ
ನಾರಯಣಾಯನಮೋ
ನಾರಾಯಣಾಯ
ನಾಭಿಕಮಲಕೆ ಶರಣು
ನಾರಾಯಣಾಯ.
ಚೌಪದವ ಚೌಪದವ
ನೀವೆಲ್ಲಾ ಕೇಳಿ..
ಕೇಳದಿದ್ದವರೆಲ್ಲ
ಹಾಳ್ ಬಾವಿ ಬೀಳಿ
ಸತ್ತ ಕಪ್ಪೆಯ ತಂದು
ಕಿವಿಗೆರಡು ಕಟ್ಟಿ
ಸತ್ತ ಹಾವನು ತಂದು
ಜನಿವಾರ ಹಾಕಿ
ಸತ್ತನೋ ಇದ್ದನೋ
ಒದ್ ಒದ್ದು ನೋಡಿ
ನಾರಯಣಾಯನಮೋ
ನಾರಾಯಣಾಯ
ನಾಭಿಕಮಲಕೆ ಶರಣು
ನಾರಾಯಣಾಯ.
ಆನೆ
(ಮಲೆನಾಡು ಪ್ರಾಂತ್ಯದವರೆಲ್ಲಾ ಕೇಳಿರಬಹುದಾದ ಜೋಗುಳ)
ಆನೆ ಬಂತೊಂದಾನೆ..
ಯಾವೂರಾನೆ..
ಸಿದ್ದಾಪುರದ್ ಆನೆ.
ಇಲ್ಲಿಗ್ಯಾಕೆ ಬಂತು..
ಹಾದಿ ತಪ್ಪಿ ಬಂತು..
ಬೀದಿ ತಪ್ಪಿ ಬಂತು..
ಆನೆ ಬಂತೊಂದಾನೆ..
ಯಾವೂರಾನೆ..
ಸಿದ್ದಾಪುರದ್ ಆನೆ.
ಇಲ್ಲಿಗ್ಯಾಕೆ ಬಂತು..
ಹಾದಿ ತಪ್ಪಿ ಬಂತು..
ಬೀದಿ ತಪ್ಪಿ ಬಂತು..
Subscribe to:
Comments (Atom)
