Saturday, August 30, 2008

ಗುಡುಗುಮ್ಮ

ಗುಡುಗುಮ್ಮ ಬಂದ
ಹೆಡಿಗೇ ತಂದ
ಅಕ್ಕಿ ಬೇಡಂತೆ
ಭತ್ತ ಬೇಡಂತೆ
ನಮ್ಮನೆ ಪಾಪುನೇ ಬೇಕಂತೆ...

ಆಚೆ ಮನೆ ಮಾಣಿ

ಆಚೆ ಮನೆ ಮಾಣಿಗೆ
ಮದ್ವೆ ವಯಸ್ಸು
ಬಂದೇ ಹೋತಡಾ
ಆಚೀಚೆ ಮನೆ
ಹೆಣ್ಣು ಹುಡ್ರುನ್ ನೋಡ್ಕ್ಯಂಡ್
ಕಣ್ ಕಣ್ ಬಿಡ್ತ್ನಡಾ

ಯಮ್ಮನೆ ಮಾಣಿ

ಯಮ್ಮನೆ ಮಾಣಿ ಸ್ಕೂಲೀಗ್ ಹೋಗ್ತ
ಅ ಆ ಬತ್ತಲ್ಲೆ
ತೋಟಕ್ ಹೋಗಿ ಬೀಡಿ ಸೇದ್ತ
ಯಾರಿಗೂ ಗೊತ್ತಿಲ್ಲೆ.

ಯಮ್ಮನೆ ಮಾಣಿ

ಯಮ್ಮನೆ ಮಾಣಿ ಸ್ಕೂಲೀಗ್ ಹೋಗ್ತ
ಅ ಆ ಬತ್ತಲ್ಲೆ
ತೋಟಕ್ ಹೋಗಿ ಬೀಡಿ ಸೇದ್ತ
ಯಾರಿಗೂ ಗೊತ್ತಿಲ್ಲೆ.

Tuesday, August 19, 2008

ಏಕಾದಶಿ

ಆಚೆ.. ಮನೆ ಸುಬ್ಬಮ್ಮಂಗೇಕಾದಶಿ
ಉಪವಾಸ
ಏನೋ ಸ್ವಲ್ಪ ತಿಂತಾರಂತೆ
ಉಪ್ಪಿಟ್ಟು ಅವಲಕ್ಕಿ ಪಾಯ್ಸ...

Monday, August 18, 2008

ಮಂಗನ ಮದುವೆ

(ಬಿಸಿಲು ಮಳೆ ಒಟ್ಟಿಗೆ ಬಂದಾಗ ಈ ಹಾಡು)

ಬಿಸಿಲು ಮಳೆ
ಮಂಗನ ಮದುವೆ
ಚೊರಾಟೆ ಚಕ್ಲಿ
ನಂಜುಳ್ಳೆ ಪಾಯ್ಸ
ಕಪ್ಪೆ ದಿಬ್ಣ

ಬೋಳುಮಂಡೆ

(ಚೌ(ಕ್ಷೌ)ರ ಮಾಡಿಸಿಕೊಂಡು ಬಂದವರಿಗಾಗಿ ಈ ಹಾಡು)

ಬೋಳುಮಂಡೆ
ಸಾಣೀಕಲ್ಲು
ಸೊಮಾರ ಒಪ್ಪೊತ್ತು